Wednesday, August 16, 2023

ಕಾವೇರಿ ತೀರದ ಪಯಣ




ತಲಕಾವೇರಿಯಿಂದ ಪೂಂಪುಹರ್ ವರೆಗೆ

ಸಾಗುತಿದೆ

ನೀರೇ ಇಲ್ಲದ ಕಾಲುವೆಗಳ ದಾಟಿ

ಮಾನ್ಸೂನ್ ಮಾರುತಗಳೆಲ್ಲೋ ರಂಗ?


ಕಾವೇರಿದ ಬಿಸಿಲಿನ ಬೇಗೆಗೆ

ಉರಿಯುತಿದೆ 

ಧರೆಯು ಅಣೆಕಟ್ಟುಗಳನ್ನು ಅಣಕಿಸಿ

ಮೇಘರಾಜನ  ಮನ್ನಸಿ ಕೆಳಗಿಳಿಸೋ ರಂಗ!


ತಲಾಕಾವೇರಿಯಲ್ಲಿ ತಾಯಿಯ 

ಬೇಡಿ

ಪಟ್ಟಣದಲ್ಲಿ ರಂಗ, ನಿನ್ನ

ನೋಡಿ

ಹಾದಿಯುದ್ದಕ್ಕೂ ಹಸಿರು ಬಯಸಿದ ನಮಗೆ

ಜಲಪಾತದಿ ಧುಮ್ಮಿಕ್ಕಿ ಬಿಡವ ನೀರಿನ ಹೊಗೆಯೇನ್

ಕಾಣದೆ

ಬರಿ ಕಲ್ಲು ಕಂಡು ಕೊರಗಿದೆ ಆದಿ ರಂಗ!!



ಆದಿ ಅಂತ್ಯ ಗಳ ನಡುವೆ

ಹುಡುಕಿದೆ

ನಿನ್ನ ಓ ಶ್ರೀ ರಂಗ!

ಶಿವನ ಕೇಳಿದೆ, ಸಮುದ್ರವ

ಕಲಕಿದೆ 

ಮಧ್ಯ ವೆಲ್ಲಿಹುದೋ ರಂಗ?


ಮುಂಜಾವಿನಿಂದ

ಮಧ್ಯಾ

ಹ್ನನದವರೆಗು ಸಾಲಿನಲಿ 

ತಾಳಲಾಗದೆ ತವಕದಿ ಕಾಯುತಿದೆ ಮನ

ವೇಗದ ನಿನ್ನ ದರ್ಶನಕೆ

ನೂರು ರೂ ರೊಕ್ಕ ಕಟ್ಟಿರುವರು ಅಂತ್ಯ ರಂಗ!


ಒಂದೊಪ್ಪತ್ತು ರೊಟ್ಟಿ 

ಬೇಡಲು ಬಂದಿರುವ ಜನ ಕೋಟಿ

ಕಾದು ಕಾದು ಬಸವಳಿದಿಹರು

ಗೋಚರಿಸು ಒಮ್ಮೆ ಗೋಡೆಯಲ್ಲೊ,

ವಿಮಾನದಲ್ಲೊ!


ನೋಡಿ ಕಣ್ತುಂಬಿಕೊಳ್ಳುವ ತವಕ

ಸಾಗಬೇಕಿದೆ ಮುಂದೆ 

ಕಾವೇರಮ್ಮನ ಜೊತೆ

ಕಡಲು ಸೇರುವ ತನಕ!!




                                                              ✍️ಹನಿ ವಿಕ್ಸ್






No comments:

Post a Comment