ಯಾವ ಗಿಡವ ನೆಡಲಿ ಯಾವ ಕುಂಡದಲಿ
ಕಾಶಿಕಣಗಲೆ ನೆಡಲೇ?
ಪೂಜೆಗಾದೀತು ಬಸವನ ಪಾದಕೆ!
ಗುಲಾಬಿ ಹಾಕಲೇ?
ಕಂಗೊಳಿಸೀತು ಕೆಂಗುಲಾಬಿ ನಿನ್ನ ಕೇಷರಾಶಿಯಲಿ!
ಮೈಸೂರು ಮಲ್ಲಿಗೆ ಹಾಕಲೆ?
ಘಮ್ಮೆಂದೀತು ಹೂ ಅರಳಿದಾಗ
ಕರಿಬೇವು ಹಾಕಲೇ?
ಚಟಪಟವೆಂದೀತು ಒಗ್ಗರಣೆ ಆಕಿದಾಗ
ಬೆಳೆದಿತ್ತು ಕೊತ್ತಂಬರಿಯೊಳಗೆ ಕಳೆ (ವೀಡು) ಸೊಪ್ಪೊಂದು
ಅದು ಗೊತ್ತಿಲ್ಲದೆ ಹೊಟ್ಟೆಸೇರಿತ್ತು ಚಿರುಮುರಿಜೊತೆಗೆ ತಿಂದು
ಯಾವ ಗಿಡ ನೆಟ್ಟರೆ ಬಿಡುವುದು “ಕಾಂಚಾಣ” ವೆಂದು?
ಮೂಲೆಯಲಿ ಮಡದಿ ನೆಟ್ಟಿದ್ದ “ಮನಿ ಪ್ಲಾಂಟು”
ಮೂದಲಿಸಿತು “ನಾನು” ಎಂದು
ಚುಚ್ಚಿದೆ ಎಲೆಗೆ ಹತ್ತು ರೂ ನೋಟು
ಸುಮ್ಮನೆ ನೋಡೋಣ ಎಂದು
ಮೆಲ್ಲಗೆ ಪಿಸುಗುಟ್ಟಿದೆ…
ನೋಡು ಬಾ ಮಡದಿ ಮನಿಪ್ಲಾಂಟ್ ಬಿಟ್ಟಿದೆ ಕಾಸು
ಬಂದು ತೆಗೆದುಕೊಂಡಳು ವಿಜ್ಞಾನದ ಕ್ಲಾಸು
ಕಿಚ್ಚಿನಿಂದ ಕಿರುಚಿದಳು…
ಕೈಲಾಸದಲ್ಲಿದ್ದ ಕೃಶ್ಣನೂ ಕಣ್ಬಿಟ್ಟನು ಕೇಳಲೆಂದು
ಗಿಡ ಹಾಕಿದ್ದು ಹಣ ಬಿಡಲೆಂದಲ್ಲ, ಆಕ್ಸಿಜೆನ್ ಕೊಡಲೆಂದು!!
ತರಗತಿ ಮುಂದುವರೆಯುವುದು!
-ಹನಿ ವಿಕ್ಸ್
No comments:
Post a Comment