ಮನೆ ಹೊರಗೆ
ಹಾದಿಯಲಿ ಹಣ್ಣಿನ ಗಿಡ ನೆಟ್ಟರೆ
ನೆಲೆಯಾದೀತು ಪ್ರಾಣಿ ಪಕ್ಷಿಗಳಿಗೆ
ದಾರಿಯಲಿ ಮರ ನೆಟ್ಟರೆ
ನೆರಳಾದೀತು ದಾರಿಹೋಕರಿಗೆ
ಮನೆಯೊಳಗೆ
ಪ್ಲಾಸ್ಟಿಕ್ ಗಿಡ ಅಲಂಕಾರಕಿಟ್ಟರೆ
ಹಸಿವಿಂಗಿಸಲು ಆಹಾರವಾದೀತೆ?
ಕಪಾಟಿನಲ್ಲಿ ಹೂ ಕುಂಡವಿಟ್ಟರೆ
ಹೂಗಳು ಮುಡಿಗಾದೀತೆ?
ಮನೆಯೊಡತಿ ಅಂಗಳದಿ ನೆಟ್ಟು ಸ್ನೇಕ್ ಪ್ಲಾಂಟ್
ಮಾಡಿದ್ದಳು ಸುಂದರವಾದ ಅದೃಷ್ಟದ ಪಾರ್ಕು
ಮನೆಯೊಡೆಯ ಕೆಲಸಕ್ಕೋಗುತ್ತಿದ್ದಿದು ಬಿಡದಿ ಪ್ಲಾಂಟ್
ಮನೆಯಂಗಳವು ಶೆಡ್ಡಾಯಿತು ಮಾಡಲು ಟೊ. ಫಾರ್ಚುನರ್ ಕಾರ್ ಪಾರ್ಕು
ಹರನ ಹಣೆಯಿಂದ ಧರೆಗಿಳಿದ ಗಂಗೆಯೂ ಮಲಿನವಾಗಿ
ಅಗಸ್ತ್ಯರ ಕಮಂಡಲದಿಂದಿಳಿದ ಕಾವೇರಿಯೂ ಖಾಲಿಯಾಗಿ
ಆಕಾಶದಿಂದ ಮೋಡವೆಲ್ಲ ಕೆಳಗಿಳಿದು ಬಂದರೂ
ಆಣೆ ಮಾಡಿ ಹೇಳುವೆ, ಅಮೇಜಾನ್ ನಿಂದಲೂ
ಮನುಜ ನೀಗಿಸಲಾರದು ನಿನ್ನ ದಾಹ
ನಿಂದಿಸಲಾಗದು ನಿನ್ನ ಹೊಟ್ಟೆಕಿಚ್ಚು
ಕಡಿಯದೇ ಬಿಟ್ಟಿದ್ದರೆ ಅಂದು ಮಾವು, ಹಲಸು, ಜಾಲಿಗಿರಿ
ಕೊಡುತ್ತಿದ್ದವು ಇಂದು ಮರ ಮುಟ್ಟು ಫಲ
ಎಲ್ಲಿಂದಲೋ ತಂದು ಬಿತ್ತಿದರು ನೀಲಗಿರಿ
ಅದು ಬೆಳೆ ಬೆಳೆದು ಬತ್ತಿಹುದು ಇಂದು ಅಂತರ್ಜಲ
ಜನ ಮನ ತನುವೆಲ್ಲ ಬರೀ ಜಿಡಿಪಿ ಕಡೆ ಗಮನ
ದ್ರುವಗಳಿಂದ ಹಿಮಕರಗಿ ಕಡಲೊಡಲಸೇರಿ
ಉಂಟಾಗಿದೆ ಗುರುತ್ವಾಕರ್ಷಣೆ ಬಲದ ಅಸಮತೋಲನ
ಸ್ವಲ್ಪ ಬದಲಿಸಿಹುದು ಭೂಮಿ ತಾನು ತನ್ನ ಸುತ್ತ ತಿರುಗುವ ಕಕ್ಷೆ
ಭೂಮಂಡಲ ಬಿಟ್ಟು ಮಂಗಳಕಿನ್ನು ತಲುಪಿಲ್ಲ ನಾವು ಬೇಡಲು ಬಿಕ್ಷೆ
ಮನುಜ, ನಿಲ್ಲಿಸು ನಿನ್ನ ಬೋರು, ಕಾರು , ಕಾರ್ಖಾನೆಗಳನ್ನ
ನಿನ್ನ ಕೊರಳಿಗೆ ನೀನೆ ಉರುಳಾಗುವ ಮುನ್ನ
ಕಾಡು ಕಡಿದು ಹೈ ವೇಗಳನ್ನು ನಿರ್ಮಿಸುವ ಸರಕಾರ
ಬದಿಗಳಲ್ಲಿ ಮರನೆಡಬೇಕು ನಿಯಮನುಸಾರ
ರಸ್ತೆ ಸುಂಕದ ಜೊತೆಗೆ ನಾವು ಕಟ್ಟಬೇಕು ಹಸಿರು ಸೆಸ್ ಕರ
ಐದಾರು ಟೋಲ್ ಬೂತ್ ಸಿಕ್ಕರೂ ಕಾಣುವುದಿಲ್ಲವೊಂದು ಮರ
ಊರು ಕೇರಿಗಳಲ್ಲಿ ಬಾರು ಪಬ್ಗಳ ನೆಟ್ಟ ಮಧ್ಯದ ದೊರೆ
ಕಿಂಗ್ ಫಿಷರ್ ಪಕ್ಷಿಯೊಂದಕ್ಕಷ್ಟೆ ಅಲ್ಲಿ ಆಸರೆ
ನೂರಾರು ಮರಗಳನು ನೆಟ್ಟಿರುವರು ಸಾಲಾಗಿ
ಶತಾಯುಷಿ “ತಿಮ್ಮಕ್ಕ” ನವರೊಬ್ಬರೆ!!
✍️ಹನಿ ವಿಕ್ಸ್
No comments:
Post a Comment