Tuesday, August 22, 2023

ತಪ್ಪಿನರಿವಿನ ತೆಪ್ಪವನೇರಿ ಸೈಕಲ್ ಸವಾರಿ

ತಪ್ಪಿನರಿವಿನ ತೆಪ್ಪವನೇರಿ ಸೈಕಲ್ ಸವಾರಿ


ನೀರಿನಲ್ಲಿ ಸೈಕಲ್ ಗೆ ತೆಪ್ಪವಾಸರೆ

ರಸ್ತೆಯಲ್ಲಿ ತೆಪ್ಪಕ್ಕೆ ಸೈಕಲ್ ಆಸರೆ

ಕಾಲ್ನಡಿಗೆಯೇ ಗತಿ ಕೊನೆಗೆ

ಟೈರೊಳಗಿನ ಗಾಳಿ ಕೈಕೊಟ್ಟರೆ

ನೀರಿನೊಳುಗು ಮೀನಿಗೆ ಗಾಳಿಯೇ ಉಸಿರೆ?

ಬಲೆಯೊಳಗೆ ಮೀನುಗಳು ಮನುಜನ ಕೈಸೆರೆ!


ಪ್ರತಿಯೊಂದು ಪ್ರಾಣಿಗೊಂದು ಧಯಾಸಂಘ

ಭೇಟೆಯಾಡಿದರೆ ಕಾಡು ಪ್ರಾಣಿ ಪಕ್ಷಿ

ಜೈಲಿಗಟ್ಟುವರು ಜನರ ಸಮೇತ ಸಾಕ್ಷಿ

ಮೀನು ಕೊಂದರೆ ಕೇಳುವರೇ ಇಲ್ಲ ಮತ್ಸ್ಯರಾಜ!



ಹೈ ವೇಯಲ್ಲಿ ಮಾಡುವರು ರೈಡ್ 

ಬುಲೆಟ್ ಸಿಕ್ಕರೆ ಬಿಟ್ಟಿ

ಪೆಟ್ರೋಲ್ ಡೀಸಲ್ ಬಹಳ ತುಟ್ಟಿ

ತೆಪ್ಪವ ತಿರುಗಿಸಿರೆ, ರೆಟ್ಟೆ ಗಟ್ಟಿ

ಸೈಕಲ್ ತುಳಿದರೆ, ಕಾಲು ಗಟ್ಟಿ

ತುಳಿದು ತಿರುಗಿಸಿರೆ ಆಗುವರು ಜಟ್ಟಿ!


ತಪ್ಪಿತಸ್ಥನೆಂಬ ಮುಸುಕನು ತೆಗೆದು

ಕೀಳಿರಿಮೆಯನ್ನೇ ಮೆಟ್ಟಿಲನು ಮಾಡಿ

ಆತ್ಮವಿಶ್ವಾಸವನ್ನೇ ಉಸಿರಾಗಿಸಿಕೊಂಡು

ಕಿಮ್ಮತ್ತಿನ ಬಗ್ಗೆ ತಲೆಕೊಡದೆ ಕತ್ತೆಯನ್ನೇರಿ 

ಹೆಮ್ಮೆಯಿಂದ ಹೆಜ್ಜೆಹಾಕು ಹಿಂಜರಿಯದೆ

ಯಾಟೆಗಳಿಗೆಲ್ಲ ಈಟುವ ಹುಂಜನಂತೆ!


ಕನಸಿನ ಕದುರೆಯನೇರಿ

ಗುರಿಮುಟ್ಟಿದೆಡೆ ದೊರೆಯದು

ಕಿರೀಟ


ಮುಂದೆ ಸಾಗಲಿ

ಸರಿದಾರಿಯಲಿ ಸೈಕಲ್ ಸವಾರಿ

ಜೇವನ ಚಕ್ರ ತಿರುಗುತಿರಲಿ

ತಪ್ಪಿನರಿವಿನ ತೆಪ್ಪವನೇರಿ!!


                                     ✍️ಹನಿ ವಿಕ್ಸ್



Wednesday, August 16, 2023

ಕಾವೇರಿ ತೀರದ ಪಯಣ




ತಲಕಾವೇರಿಯಿಂದ ಪೂಂಪುಹರ್ ವರೆಗೆ

ಸಾಗುತಿದೆ

ನೀರೇ ಇಲ್ಲದ ಕಾಲುವೆಗಳ ದಾಟಿ

ಮಾನ್ಸೂನ್ ಮಾರುತಗಳೆಲ್ಲೋ ರಂಗ?


ಕಾವೇರಿದ ಬಿಸಿಲಿನ ಬೇಗೆಗೆ

ಉರಿಯುತಿದೆ 

ಧರೆಯು ಅಣೆಕಟ್ಟುಗಳನ್ನು ಅಣಕಿಸಿ

ಮೇಘರಾಜನ  ಮನ್ನಸಿ ಕೆಳಗಿಳಿಸೋ ರಂಗ!


ತಲಾಕಾವೇರಿಯಲ್ಲಿ ತಾಯಿಯ 

ಬೇಡಿ

ಪಟ್ಟಣದಲ್ಲಿ ರಂಗ, ನಿನ್ನ

ನೋಡಿ

ಹಾದಿಯುದ್ದಕ್ಕೂ ಹಸಿರು ಬಯಸಿದ ನಮಗೆ

ಜಲಪಾತದಿ ಧುಮ್ಮಿಕ್ಕಿ ಬಿಡವ ನೀರಿನ ಹೊಗೆಯೇನ್

ಕಾಣದೆ

ಬರಿ ಕಲ್ಲು ಕಂಡು ಕೊರಗಿದೆ ಆದಿ ರಂಗ!!



ಆದಿ ಅಂತ್ಯ ಗಳ ನಡುವೆ

ಹುಡುಕಿದೆ

ನಿನ್ನ ಓ ಶ್ರೀ ರಂಗ!

ಶಿವನ ಕೇಳಿದೆ, ಸಮುದ್ರವ

ಕಲಕಿದೆ 

ಮಧ್ಯ ವೆಲ್ಲಿಹುದೋ ರಂಗ?


ಮುಂಜಾವಿನಿಂದ

ಮಧ್ಯಾ

ಹ್ನನದವರೆಗು ಸಾಲಿನಲಿ 

ತಾಳಲಾಗದೆ ತವಕದಿ ಕಾಯುತಿದೆ ಮನ

ವೇಗದ ನಿನ್ನ ದರ್ಶನಕೆ

ನೂರು ರೂ ರೊಕ್ಕ ಕಟ್ಟಿರುವರು ಅಂತ್ಯ ರಂಗ!


ಒಂದೊಪ್ಪತ್ತು ರೊಟ್ಟಿ 

ಬೇಡಲು ಬಂದಿರುವ ಜನ ಕೋಟಿ

ಕಾದು ಕಾದು ಬಸವಳಿದಿಹರು

ಗೋಚರಿಸು ಒಮ್ಮೆ ಗೋಡೆಯಲ್ಲೊ,

ವಿಮಾನದಲ್ಲೊ!


ನೋಡಿ ಕಣ್ತುಂಬಿಕೊಳ್ಳುವ ತವಕ

ಸಾಗಬೇಕಿದೆ ಮುಂದೆ 

ಕಾವೇರಮ್ಮನ ಜೊತೆ

ಕಡಲು ಸೇರುವ ತನಕ!!




                                                              ✍️ಹನಿ ವಿಕ್ಸ್






Friday, June 23, 2023

ಡೈಲಾಗ್ಸ್ -GGF

 

Gooly GreenFields 

ಬುಲೆಟ್  ಬಸ್ಯ, ಬುಲೆಟ್ ಬೈರ ಅಂತ ಹುಡುಗರು ಹೆಸರಿಡುಕೊಳ್ತಾರೆ..

ಬುಲೆಟ್ ಗೆ ರಥ, ಥೇರು ಅಂತ ಎಲ್ಲ ಹೆಸರಿಡುಕೊಳ್ತಾರೆ..

ಆದರೆ ಗೂಳಿಗೆ ಏನು ಹೆಸರಿಡಲ್ಲ .. ಗೂಳಿ ನ ಗೂಳಿ ಅಂತನೇ ಕರೆಯೋದು..

ಯಾಕಂದ್ರೆ , ಬುಲೆಟ್ ಗಳಿಗೆ ಬೇರೆ ಬೇರೆ CC ಇರುತ್ತೆವೆ

ಆದರೆ ಗೂಳಿಗೆ ಒಂದೇ ಗುಂಡ್ಗೆ ಇರೋದು ತಮ್ಮ.. 

ನುಗ್ಗುದ್ರೆ …

Sunday, June 18, 2023

ಸಾಲುಮರದ ತಿಮ್ಮಕ್ಕ


ಮನೆ ಹೊರಗೆ

ಹಾದಿಯಲಿ ಹಣ್ಣಿನ ಗಿಡ ನೆಟ್ಟರೆ

ನೆಲೆಯಾದೀತು ಪ್ರಾಣಿ ಪಕ್ಷಿಗಳಿಗೆ

ದಾರಿಯಲಿ ಮರ ನೆಟ್ಟರೆ

ನೆರಳಾದೀತು ದಾರಿಹೋಕರಿಗೆ


ಮನೆಯೊಳಗೆ 

ಪ್ಲಾಸ್ಟಿಕ್ ಗಿಡ ಅಲಂಕಾರಕಿಟ್ಟರೆ

ಹಸಿವಿಂಗಿಸಲು ಆಹಾರವಾದೀತೆ?

ಕಪಾಟಿನಲ್ಲಿ ಹೂ ಕುಂಡವಿಟ್ಟರೆ

ಹೂಗಳು ಮುಡಿಗಾದೀತೆ?


ಮನೆಯೊಡತಿ ಅಂಗಳದಿ ನೆಟ್ಟು ಸ್ನೇಕ್ ಪ್ಲಾಂಟ್

ಮಾಡಿದ್ದಳು ಸುಂದರವಾದ ಅದೃಷ್ಟದ ಪಾರ್ಕು

ಮನೆಯೊಡೆಯ ಕೆಲಸಕ್ಕೋಗುತ್ತಿದ್ದಿದು ಬಿಡದಿ ಪ್ಲಾಂಟ್

ಮನೆಯಂಗಳವು ಶೆಡ್ಡಾಯಿತು ಮಾಡಲು ಟೊ. ಫಾರ್ಚುನರ್ ಕಾರ್ ಪಾರ್ಕು


ಹರನ ಹಣೆಯಿಂದ ಧರೆಗಿಳಿದ ಗಂಗೆಯೂ ಮಲಿನವಾಗಿ

ಅಗಸ್ತ್ಯರ ಕಮಂಡಲದಿಂದಿಳಿದ ಕಾವೇರಿಯೂ ಖಾಲಿಯಾಗಿ

ಆಕಾಶದಿಂದ ಮೋಡವೆಲ್ಲ ಕೆಳಗಿಳಿದು ಬಂದರೂ

ಆಣೆ ಮಾಡಿ ಹೇಳುವೆ, ಅಮೇಜಾನ್ ನಿಂದಲೂ 

ಮನುಜ ನೀಗಿಸಲಾರದು ನಿನ್ನ ದಾಹ

ನಿಂದಿಸಲಾಗದು ನಿನ್ನ ಹೊಟ್ಟೆಕಿಚ್ಚು


ಕಡಿಯದೇ ಬಿಟ್ಟಿದ್ದರೆ ಅಂದು ಮಾವು, ಹಲಸು, ಜಾಲಿಗಿರಿ

ಕೊಡುತ್ತಿದ್ದವು ಇಂದು ಮರ ಮುಟ್ಟು ಫಲ

ಎಲ್ಲಿಂದಲೋ ತಂದು ಬಿತ್ತಿದರು ನೀಲಗಿರಿ

ಅದು ಬೆಳೆ ಬೆಳೆದು ಬತ್ತಿಹುದು ಇಂದು ಅಂತರ್ಜಲ

ಜನ ಮನ ತನುವೆಲ್ಲ ಬರೀ ಜಿಡಿಪಿ ಕಡೆ ಗಮನ

ದ್ರುವಗಳಿಂದ ಹಿಮಕರಗಿ ಕಡಲೊಡಲಸೇರಿ

ಉಂಟಾಗಿದೆ ಗುರುತ್ವಾಕರ್ಷಣೆ ಬಲದ ಅಸಮತೋಲನ


ಸ್ವಲ್ಪ ಬದಲಿಸಿಹುದು ಭೂಮಿ ತಾನು ತನ್ನ ಸುತ್ತ ತಿರುಗುವ ಕಕ್ಷೆ

ಭೂಮಂಡಲ ಬಿಟ್ಟು ಮಂಗಳಕಿನ್ನು ತಲುಪಿಲ್ಲ ನಾವು ಬೇಡಲು ಬಿಕ್ಷೆ

ಮನುಜ, ನಿಲ್ಲಿಸು ನಿನ್ನ ಬೋರು, ಕಾರು , ಕಾರ್ಖಾನೆಗಳನ್ನ

ನಿನ್ನ ಕೊರಳಿಗೆ ನೀನೆ ಉರುಳಾಗುವ ಮುನ್ನ


ಕಾಡು ಕಡಿದು ಹೈ ವೇಗಳನ್ನು ನಿರ್ಮಿಸುವ ಸರಕಾರ

ಬದಿಗಳಲ್ಲಿ  ಮರನೆಡಬೇಕು ನಿಯಮನುಸಾರ

ರಸ್ತೆ ಸುಂಕದ ಜೊತೆಗೆ  ನಾವು ಕಟ್ಟಬೇಕು ಹಸಿರು ಸೆಸ್ ಕರ

ಐದಾರು ಟೋಲ್ ಬೂತ್ ಸಿಕ್ಕರೂ ಕಾಣುವುದಿಲ್ಲವೊಂದು ಮರ


ಊರು ಕೇರಿಗಳಲ್ಲಿ ಬಾರು ಪಬ್ಗಳ ನೆಟ್ಟ ಮಧ್ಯದ ದೊರೆ

ಕಿಂಗ್ ಫಿಷರ್ ಪಕ್ಷಿಯೊಂದಕ್ಕಷ್ಟೆ ಅಲ್ಲಿ ಆಸರೆ

ನೂರಾರು ಮರಗಳನು ನೆಟ್ಟಿರುವರು ಸಾಲಾಗಿ 

ಶತಾಯುಷಿ “ತಿಮ್ಮಕ್ಕ” ನವರೊಬ್ಬರೆ!!


                                                    ✍️ಹನಿ ವಿಕ್ಸ್

Thursday, June 15, 2023

ಯಾವ ಗಿಡವ ನೆಡಲಿ


ಯಾವ ಗಿಡವ ನೆಡಲಿ ಯಾವ ಕುಂಡದಲಿ






ಕಾಶಿಕಣಗಲೆ ನೆಡಲೇ? 

ಪೂಜೆಗಾದೀತು ಬಸವನ ಪಾದಕೆ!

ಗುಲಾಬಿ ಹಾಕಲೇ?

ಕಂಗೊಳಿಸೀತು ಕೆಂಗುಲಾಬಿ ನಿನ್ನ ಕೇಷರಾಶಿಯಲಿ!


ಮೈಸೂರು ಮಲ್ಲಿಗೆ ಹಾಕಲೆ?

ಘಮ್ಮೆಂದೀತು ಹೂ ಅರಳಿದಾಗ

ಕರಿಬೇವು ಹಾಕಲೇ? 

ಚಟಪಟವೆಂದೀತು ಒಗ್ಗರಣೆ ಆಕಿದಾಗ


ಬೆಳೆದಿತ್ತು ಕೊತ್ತಂಬರಿಯೊಳಗೆ ಕಳೆ (ವೀಡು) ಸೊಪ್ಪೊಂದು

ಅದು ಗೊತ್ತಿಲ್ಲದೆ ಹೊಟ್ಟೆಸೇರಿತ್ತು ಚಿರುಮುರಿಜೊತೆಗೆ ತಿಂದು

ಮತ್ತೇರಿತು ನೆತ್ತಿಗೆಗೆ, ತಲೆಗಚ್ಚಿತು ಪ್ರಶ್ಣೆಯೊಂದು !

ಯಾವ ಗಿಡ ನೆಟ್ಟರೆ  ಬಿಡುವುದು “ಕಾಂಚಾಣ” ವೆಂದು? 



ಮೂಲೆಯಲಿ ಮಡದಿ ನೆಟ್ಟಿದ್ದ  “ಮನಿ ಪ್ಲಾಂಟು”

ಮೂದಲಿಸಿತು “ನಾನು” ಎಂದು

ಚುಚ್ಚಿದೆ  ಎಲೆಗೆ ಹತ್ತು ರೂ ನೋಟು

ಸುಮ್ಮನೆ ನೋಡೋಣ ಎಂದು



ಮೆಲ್ಲಗೆ ಪಿಸುಗುಟ್ಟಿದೆ…

ನೋಡು ಬಾ ಮಡದಿ ಮನಿಪ್ಲಾಂಟ್ ಬಿಟ್ಟಿದೆ ಕಾಸು

ಬಂದು ತೆಗೆದುಕೊಂಡಳು ವಿಜ್ಞಾನದ ಕ್ಲಾಸು

ಕಿಚ್ಚಿನಿಂದ  ಕಿರುಚಿದಳು…

ಕೈಲಾಸದಲ್ಲಿದ್ದ ಕೃಶ್ಣನೂ ಕಣ್ಬಿಟ್ಟನು ಕೇಳಲೆಂದು

ಗಿಡ ಹಾಕಿದ್ದು ಹಣ ಬಿಡಲೆಂದಲ್ಲ, ಆಕ್ಸಿಜೆನ್ ಕೊಡಲೆಂದು!!


ತರಗತಿ ಮುಂದುವರೆಯುವುದು! 


        

                                                            -ಹನಿ ವಿಕ್ಸ್





Wednesday, June 14, 2023

ಅನು-ಸೂರ್ಯ









ಪ್ರತಿದಿನ ನೀ ಹಾಜರ್

ಆಗಲ್ಲವೇ ನಿನಗೆ ಬೇಜಾರ್

ಭೂಮಿಗೆ ತೋರುಸು ನಿನ್ನ ಮುನಿಸು

ಒಂದು ದಿನ…

ನಿನ್ನ ಬದಲಿಗೆ ಚಂದ್ರನ ಕಳುಹಿಸು!


ನಿನ್ನ ಆಗಮನಕೆ

ಹಕ್ಕಿಗಳ ಚಿಲಿಪಿಲಿಯೇ ಸ್ವಾಗತ

ಹಿಬ್ಬನಿಯ ಸಿಂಚನ

ನಿನ್ನ ನಿರ್ಗಮನಕೆ

ದೀಪದ ಬೆಳಕಿನ ಬೀಳ್ಕೊಡುಗೆ

ಎಣ್ಣೆ ಮುಗಿಯೋವರೆಗು

ಬತ್ತಿ ಉರಿಯೋವರೆಗು!

ಹಣತೆಯ ಅಣತಿಯಂತೆ

ಗುಂಡಿ ನೀರು ಬತ್ತುವವರೆಗು!

ಭತ್ತದ ತೆನೆಯು ಬೀಳುವವರೆಗು..


ಒಂದು ದಿನ…

ಧಣಿದು ಸುಸ್ತಾಗಿ ಉಳಿದು ಬಿಡು ಇಲ್ಲೇ

ಯಾರಿಗೂ ಗೋಚರಿಸದಂತೆ  ಮೋಡದ ಮರೆಯಲ್ಲೆ


ಸಂಜೆಯಾಯಿತೆಂದು

ಪ್ರಾಣಿ ಪಕ್ಷಿಗಳೆಲ್ಲ ಗೂಡು ಸೇರಲಿ

ಬಾರು ಪಬ್ಗಳಲಿ ಬಾಟಲಿಗಳು ತೆರೆಯಲಿ

ಸಂದಿಗೊಂದಿಗಳಲಿ ಸುಖಕೂ ಚೌಕಾಸಿ ಶುರುವಾಗಲಿ

ನಶೆಯಲಿ ದುರ್ಜನರೆಲ್ಲ ತೇಲುತಲಿರಲಿ

ಕಳ್ಳರು ಕಿಸೆಯಿಂದ ಕಾಂಚಾಣವನೆಲ್ಲ ಪಂದ್ಯದ ಪಣಕಿಡಲಿ


ಚಂದ್ರ ಬೆಳದಿಂಗಳಿಟ್ಟು ನಗುತ್ತಿದ್ದ 

ಜಗದ ಜೂಜಾಟ ನೋಡಿ

ಹೊಸ ನಿಯಮ ಬರೆದು ಮಾಡಿಬಿಡು

ನಿನ್ನ ಕಿರಣ ಸ್ಪರ್ಷದಿಂದ ಮೋಡಿ

ಕಲಿಯುಗದ ಈ ಕರ್ಮಕ್ಕೆ ಕೊನೆಯುಂಟೆ?

ಅಂದು ತಪ್ಪಿಸಿದ್ದರೆ ನಿನ್ನ ಪುತ್ರನ ತೊಡೆಕೊರೆಯುವ ಹುಳುವೊಂದರ ಕಾಟ

ಕುರುಕ್ಷೇತ್ರದಲಿ ಕರ್ಣ  ಸೋಲಿತಿದ್ದುದುಂಟೆ?

ಮರುಕಳಿಸೀತು ಮತ್ತೊಂದು ಮಹಾಯುದ್ದದಾಟ

ಇಂದು ಕಲಿಸಿಬಿಡು ಪಕ್ಷಪಾತಕರಿಗೊಂದು ಪಾಠ

ಗುಂಗೆಹುಳು ಜನರ ಕಿವಿಯಲಿ ಹೂವಿಟ್ಟು

ತಿಳಿಸಿ ಬಿಟ್ಟಾನು ಇವರಿಗೆಲ್ಲ ನೀನು ಅಡಗಿರುವ ಗುಟ್ಟು

ಕೊಟ್ಟುಬಿಡು ಜನರಿಗಿಂದು  ಮರೆಯಲಾಗದ ಪೆಟ್ಟು


ಸುಟ್ಟುಬಿಡು ಪರಮಾಣು ಅಸ್ತ್ರ

ಬಿಟ್ಟುಬಿಡು ಅಪರಿಮಿತ ಶಾಸ್ತ್ರ


ಸುಟ್ಟುಬಿಡು ಧರ್ಮವನ್ನಲ್ಲ

ಮೌಡ್ಯಗಳ ಮತಾಂಧತೆಯ 


ಸುಟ್ಟುಬಿಡು ಕನಸುಗಳನ್ನಲ್ಲ

ಕಹಿನೆನಪುಗಳ ಛಾಯೆಯ


ಸುಟ್ಟುಬಿಡು ಪ್ರೀತಿ ಪ್ರೇಮ ಸಲಿಗೆಗಳನಲ್ಲ

ಕಾಮ ಪ್ರೇತ ಪಿಶಾಚಿಗಳನ್ನ


ಸುಟ್ಟುಬಿಡು ಮುಖವನ್ನಲ್ಲ

ಮುಖವಾಡಗಳನ್ನು

ಸುಟ್ಟುಬಿಡು ಬಾಡಿಗೆತನ

ಬಿಟ್ಟುಬಿಡು ಸ್ವಂತತನ


ಸುಟ್ಟುಬಿಡು ಬಡವನ ಅನ್ನ ಬಟ್ಟೆಯನ್ನಲ್ಲ

ಕಪ್ಪುಹಣ  ಮತ್ತು  ಬಿಳಿ  ಪ್ಲಾಸ್ಟಿಕ್


ಸುಟ್ಟುಬಿಡು ಜನರನ್ನಲ್ಲ 

ಅವರ ದುರ್ನಡತೆಯ

ಶುರುವಾಗಲಿ ಸನ್ನಡತೆಯ 

ಸೂರ್ಯ ಶಕ

ಇಂದಿನಿಂದಲೇ!



                                            🖋ಹನಿ ವಿಕ್ಸ್



ಚಿಂತೆ

ಮಾಡಬೇಡ ನೀನು ಚಿಂತೆ

ಮಾಡಿದರೆ ಹಾಗುವುದು ನಿನ್ನ ತಲೆಯು ಸಂತೆ

ಚಿಂತೆಗು ಚಿತೆಗು ಇರುವ ವ್ಯತ್ಯಾಸ

ಸೊನ್ನೆ ಮಾತ್ರ

ಚಿತೆ ಸುಡುವುದು ಹೆಣ ಮಾತ್ರ

ಚಿಂತೆ ಸುಡುವುದು ಜೀವಂತ!


ಚಿಂತೆ ಇಲ್ಲದವನಿಗೆ 

ಸಂತೆಯಲ್ಲಿಯೂ ನಿದ್ದೆ!


ಮೊಬೈಲ್  ಕೈಹಿಡಿದವನಿಗೆ

ಬರುವುದೇ ಇಲ್ಲ ನಿದ್ದೆ

To be continued 





Thursday, June 8, 2023

“ಹನ್ವಿಕ್ “ ಅಂತೆ




ಪುಟ್ಟ ಪುಟ್ಟ ಕಂದ

ನಿನ್ನ ನಗುವಿವ ಚೆಂದ

ನೋಡಿ ನಾಚಿ ನಸುಕಾದ ಚಂದ್ರ

ಅಶ್ವಗಳ ಮೇಲೆ ನಿನ್ನ ಸವಾರಿ

ನೋಡಿ ನಕ್ಷತ್ರಗಳೇ ಪರಾರಿ!


ಹೂಗಳು ಅರಳುವ ಹಾಗೆ

ಸವ್ಯಸಾಚಿ ಸವಿಜೇನು (Honey) ಹಾಗೆ

ಸದಾ ಸಂಭ್ರಮಿಸುವ ಹಾಗೆ

ಹಕ್ಕಿ ಹಾರಿದ ಹಾಗೆ

ಹಾಸ್ಯಕ್ಕೆ ಹೆಸರುವಾಸಿಯಾದ “ಹನ್ವಿಕ್”!!


ಹನಿ (Honey) ಹನಿ (Honey) ಹನಿ (Honey)

Vick (ವಿಕ್) Vick (ವಿಕ್) Vick (ವಿಕ್)

ಮಗುವೇ ಮೂರು ಮಾಸಗಳು ಪೂರ್ತಿ

ಜಗದಗಲಕ್ಕೆ ಹರಡಲಿ ನಿನ್ನ ಕೀರ್ತಿ!!!


ಕೋಗಿಲೆಯ ಕಂಠ , ಕಾಮಧೇನುವಿನ ಕರುಣೆ ಇರುವ ಕರುನಾಡ ಕರ್ಣನಂತೆ 

ಅದೆಷ್ಟೋ ಆಸೆಗಳಿದ್ದರೂ ಅದೃಷ್ಟಕ್ಕೆ ಅಂಗಾಲಾಚದ “ಹನ್ವಿಕ್” ಅಂಬಿಯಂತೆ 

ಕಾಜಾಣನ ಕಾರ್ಯಕ್ಷಮತೆ ಇರುವ, ಕಲ್ಪವೃಕ್ಷದೆತ್ತರಕ್ಕೆ ಕೈ ಚಾಚಿದ ಕುಪ್ಪಳ್ಳಿಯ ಕವಿಯಂತೆ

ಅಂಬರದಲ್ಲಿ ಅಡಗಿರುವ ಆವಿಯಂತೆ, ಅಢವಿಯಲ್ಲಿ ಅಡಗಿರುವ ಹನಿ (Honey) ಯಂತೆ

ಪಾರಿಜಾತವು ಪರಿಮಳವನ್ನು ಪಂಜರದೊಳಗಿರುವ ಪಕ್ಷಿಗೆ ಪ್ರಸಾದವಿಟ್ಟಂತೆ

“ಅಶ್ವಿನಿ” ದೇವತೆಗಳ ಆಶೀರ್ವಾದ ಪಡೆದ “ಹನ್ವಿಕ್” ಅರಸನಂತೆ

ಪರ್ವತವನ್ನೇ ಪರಾಭವಗೊಳಿಸಿ ಪರಮವೀರಚಕ್ರ ಪಡೆದವನಂತೆ

ಪರಾಜಿತರ ಪರವಾಗಿನಿಂತು ಪ್ರೋತ್ಸಾಹಿಸುವ ಪುತ್ರ    ಪುನೀತನಂತೆ

ನವಿಲಿನ ನಾಟ್ಯಮಾಡಿ ನಕ್ಕು ನಗಿಸುವ ನವ “ನವೀನ” ನಂತೆ

ಪ್ರತಿದಿನ ಪ್ರತಿಕ್ಷಣ ಪ್ರಜ್ವಲಿಸುವ ಪಾರ್ಥನ ಪ್ರಣಾಳಿಕೆಯಂತೆ

ಗುರಿತಪ್ಪದ ಗಿಡುಗನಂತೆ, ಶತ್ರುಗಳಿಲ್ಲದ ಗೆಳೆಯನಂತೆ, ಶರತ್ತುಗಳಿಲ್ಲದ ಗ್ಯಾರಂಟಿಯಂತೆ!

ಅದೆಷ್ಟು ಕೊಟ್ಟರೂ ಖಾಲಿಯಾಗದ ಖಜಾನೆಯಂತೆ “ಹನ್ವಿಕ್” ಅಕ್ಷಯ ಪಾತ್ರೆಯಂತೆ!!!


                                                                      🖊ಹನಿ ವಿಕ್ಸ್